ಹರಿಣಿ ಜೀವಿತಾರವರು ಭಾರತೀಯ ಭರತನಾಟ್ಯ ಕಲಾವಿದೆ. ಮೂಲತಹ ತಮಿಳುನಾಡಿನವರು. == ಜನನ == ಇವರು ಜನವರಿ ೧೬ ೧೯೯೫ರಂದು ತಮಿಳುನಾಡಿನಲ್ಲಿ ಜನಿಸಿದರು. == ಶಿಕ್ಷಣ == ಹರಿಣಿ ಸಾಹಿತ್ಯದಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದಾರೆ. == ನೃತ್ಯಜೀವನ == ಇವರು ಭರತನಾಟ್ಯವನ್ನು ತಮ್ಮ ಆರನೇ ವಯಸ್ಸಿನಲ್ಲಿ, ಶ್ರೀದೇವಿ ನೃತ್ಯಾಲಯದಲ್ಲಿ ಕಲಿಯಲು ಆರಂಭಿಸಿದರು. ಇವರ ಗುರು ಶ್ರೀಮತಿ ಶೀಲಾ ಉನ್ನೀಕೃಷ್ಣನ್. == ಪ್ರಶಸ್ತಿಗಳು == ೨೦೧೦ರಲ್ಲಿ ರಾಷ್ಟೀಯ ಬಾಲಭವನವು ಇವರಿಗೆ ಬಾಲಶ್ರೀ ಬಿರುದನ್ನು ನೀಡಿ ಗೌರವಿಸಿದೆ., ಉತ್ತಮ ನರ್ತಕಿಯೆಂದು ರಂಜನಿ ರಾಜನ್ ಪ್ರಶಸ್ತಿ. ಜಯ ಟಿವಿಯ ತಕಧಿಮಿ ತ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ೨೦೦೫ರಲ್ಲಿ ಶಿವಾ ಆರ್ಟ್ಸ್ ಅಕಾಡೆಮಿಯಲ್ಲಿ ನೆಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಜಯ ವಿದ್ಯಾ ಕಲಿಕಾ ಕೇಂದ್ರದಲ್ಲಿ ನೆಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಅಖಿಲ ಭಾರತ ಮಟ್ಟದಲ್ಲಿ ಕನಕ ಸಭಾ ಪ್ರಶಸ್ತಿ ಗಳಿಸಿದ್ದಾರೆ. == ಛಾಯಾಚಿತ್ರ == == ಉಲ್ಲೇಖ ==